Monday, July 26, 2010

ನಾನಾಗುವ ಆಸೆ......

               ನನಗೆ...
               ನೂರಾ...ರು
               ನಾನಾಗುವ ಆಸೆ......

               ಸ್ವಚ್ಛಂದ ನೀಲಾಕಾಶದಲಿ
               ಮಳೆ ಸುರಿವ
               ಮೋಡಗಳಾಗುವಾಸೆ......

               ಆ ಮಳೆ
               ಮೋಡಗಳ ತಡೆದು
               ಮಲೆನಾಡ ಕಣಿವೆಗಳಲಿ
               ಮಳೆ ಸುರಿಸುವ
               ಗುಡ್ಡ ಬೆಟ್ಟಗಳಾಗುವಾಸೆ......

               ಆ ಮಳೆಗೆ
               ಮೊಳೆತು ಗಿಡವಾಗಿ
               ಬೆಳೆದು
               ಮುಗಿಲ ಚುಂಬಿಸುವ
               ಹೆಮ್ಮರಗಳಾಗುವಾಸೆ......
  
               ಆ ಹೆಮ್ಮರಗಳಿಗೆ ..
               ಝುಳು ಝುಳನೆ
               ಸದ್ದು ಮಾಡುತ್ತಾ
               ಎತ್ತರದ ಬಂಡೆಗಳಿಂದ
               ಭೋರ್ಗರೆದು ಕೆಳಗೆ
               ಧುಮುಕುತ್ತಾ
               ನೀರೆರೆವ ನದಿಯಾಗುವಾಸೆ......

               ಆ ನದಿಯಾಗಿ
               ಕಾಡು ನಾಡುಗಳಲ್ಲಿ
               ಹರಿಯುತ್ತಾ
               ಜೀವಿಗಳ ಬಾಯಾರಿಕೆಯಡಗಿಸಿ
               ಹಳ್ಳ ಕೊಳ್ಳಗಳನು
               ನನ್ನೊಡಲಿಗೆ ಸೇರಿಸಿಕೊಂಡು
               ಸಾಗರವ ಸೇರುವಾಸೆ......

               ಆ ಸಾಗರದ
               ನೀರಿನಲಿ ನೀರಾಗಿ
               ನನ್ನ ಬಾಹುಗಳಿಂದ
               ಭೂ ಮಂಡಲವ ತಬ್ಬಿಕೊಳುವಾಸೆ......

               ಆ ಸೂರ್ಯನಿಗೆ
               ಮುಖ ಮಾಡಿ
               ಅವನ ಪ್ರಖರವಾದ
               ಕಿರಣಗಳ ಉಷ್ಣತೆಗೆ
               ನೀರಾವಿಯಾಗಿ ಮತ್ತೆ
               ನೀಲಾಕಾಶವನು ಸೇರುವಾಸೆ......

               ಸೇರಿ ..
               ಮಳೆ ಮೋಡವಾಗುವಾಸೆ......
               ಮೋಡವಾಗಿ
               ಮಲೆನಾಡ ಕಣಿವೆಗಳಲಿ
               ಮಳೆ ಸುರಿವಾಸೆ......

(ಮಾನವನಾಸೆಗೆ.... ಕೊನೆ ಎಲ್ಲಿ.....?? )

6 comments:

  1. ಸು೦ದರ ಕನಸುಗಳು...ಚೆ೦ದದ ಕವನ...ಚೆನ್ನಾಗಿದೆ.

    ReplyDelete
  2. ಸುಂದರ ಭಾವಾರ್ಥ ಹೊಂದಿದ ಕವನಕ್ಕೆ ಅಭಿನಂದನೆಗಳು..... ಧನ್ಯವಾದ...

    ReplyDelete
  3. ಮನಮುಕ್ತಾ ಹಾಗೂ ದಿನಕರ ಮೊಗೇರ ಅವರಿಗೆ ಸ್ವಾಗತ., ನನ್ನಾಸೆಗಳನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  4. ಚೆಂದದ ಕವಿತೆ..
    ಮೂಡಿಬಂದಿದೆ
    ಸ್ವಚ್ಛಂದ ಭಾವದ ಜೊತೆಗೆ..

    ReplyDelete
  5. ಗುರುಪ್ರಸಾದ್, ಶೃಂಗೇರಿ,

    ಹೌದು..
    ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯಲ್ಲಿ.." ಹಾಡು ನೆನಪಾಗುತ್ತಿದೆ..

    ReplyDelete
  6. ರಾಘವೇಂದ್ರ ಹೆಗಡೆಯವರಿಗೆ ಹಾಗು ಕತ್ತಲೆಮನೆಯವರಿಗೆ ಸ್ವಾಗತ ಕೋರುತ್ತಾ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ :)

    ReplyDelete