ಕಂಡ ಕನಸು ನನಸಾಗಿ......
ಒಂದು ವಿಷಯ ಗೊತ್ತಾ ನಿಮಗೆ.... ನನಗೆ ಕನಸೇ ಬೀಳೋಲ್ಲ..... ಎಲ್ಲೋ ಆರು ತಿಂಗಳಿಗೋ ವರ್ಷಕ್ಕೋ ಒಂದು ಕನಸು ಬೀಳುತ್ತೆ .... ಅದೂ ಒಂದೆರೆಡು ನಿಮಿಷ.... ಹೆಚ್ಚೆಂದರೆ ಐದು ನಿಮಿಷ ಅಷ್ಟೇ..... ಮೊನ್ನೆ ಹಾಗೇ ಆಯ್ತು ನೋಡಿ... ಕನಸಲ್ಲಿ ಬೈಕ್ ತಗೋಂಡು ಎಲ್ಲೋ ಹೋಗಿದಿನಿ ಎಲ್ಲಿ ಅಂತ ಗೊತ್ತಿಲ್ಲ ಗುರಿ ತಲುಪಿದ ಮೇಲೆ ಬೈಕ್ ನ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿ ಇಳಿಯುವಾಗ ಸ್ಟ್ಯಾಂಡ್ ಮುರಿದು ನನ್ನ ಮೇಲೆ ಬೈಕ್ ಬಿತ್ತು ಅಂತೊಂದು ಕನಸು ಬಿತ್ತು..... ಬರೀ ಅಷ್ಟೇ ಬಿದ್ದಿದ್ದು.... ಸರಿ ಬೆಳಿಗ್ಗೆ ಏಳುವಾಗ ಅದು ಮರ್ತೇ... ಹೋಗಿತ್ತು. ಮಧ್ಯಾಹ್ನ ಸಮಯ ಇದ್ದಿದ್ರಿಂದ ಸಿರಿಮನೆ ಜಲಪಾತಕ್ಕೆ ಹೋಗೋಣ ಅಂತ ಪ್ಲಾನ್ ಮಾಡಿಕೊಂಡು ಊಟ ಆದಕೂಡಲೇ ಕ್ಯಾಮೆರಾ, ಟ್ರೈಪಾಡ್ ಎರಡನ್ನೂ ಕುತ್ತಿಗೆಗೆ ನೇತುಹಾಕಿಕೊಂಡು ಬೈಕ್ ನಲ್ಲಿ ಹೊರಟೆ. ಜಲಪಾತದ ಹತ್ತಿರ ಕೌಂಟರ್ ನಲ್ಲಿ ಬೈಕ್ ನಿಲ್ಲಿಸಿ ಸೈಡ್ ಸ್ಟ್ಯಾಂಡ್ ಹಾಕಿ ಇಳಿಯಬೇಕು ಅನ್ನೋವಾಗ ಸೈಡ್ ಸ್ಟ್ಯಾಂಡ್ ಮುರಿಯಬೇಕೇ......?? ಮುರಿದು ನಾನು ಅಂಗಾತ ಬಿದ್ದೆ ನನ್ ಮೇಲೆ ಬೈಕ್...... ಬೀಳುತ್ತೇನೆ ಎಂದು ಗೊತ್ತಾಗುತ್ತಲೇ ಕ್ಯಾಮೆರ ಮೇಲೆ ಎತ್ತಿ ಹಿಡಿದುಕೊಂಡಿದ್ದರಿಂದ ಬಚಾವ್ ಕ್ಯಾಮೆರಕ್ಕೂ ನನಗೂ ಏನೂ ಆಗಲಿಲ್ಲ ...... ಅಂತೂ.... ನನಗೆ ಬಿದ್ದಿದ್ದ ಕನಸು ನಿಜವಾಯಿತು......
ಇನ್ನು ಜಲಪಾತದ ಬಗ್ಗೆ ಹೇಳಬೇಕೆಂದರೆ...... ಶೃಂಗೇರಿಯಿಂದ ಹತ್ತು ಕಿ.ಮೀ. ದೂರದಲ್ಲಿ ಕಿಗ್ಗ (ಋಷ್ಯಶೃಂಗ ಪುರ) ಎಂಬ ಒಂದು ಚಿಕ್ಕ ಗ್ರಾಮವಿದೆ. ಈ ಸ್ಥಳದಲ್ಲಿ ವಿಭಾಂಡಕ ಮಹರ್ಷಿಗಳ ಮಗನಾದ ಋಷ್ಯಶೃಂಗರು ತಪಸ್ಸು ಮಾಡಿದ ಸ್ಥಳವಾದ್ದರಿಂದ ಇದಕ್ಕೆ ಋಷ್ಯಶೃಂಗ ಪುರವೆಂಬ ಹೆಸರು ಬಂದಿದೆ. ಈಶ್ವರನು ಋಷ್ಯಶೃಂಗರಲ್ಲಿ ಐಕ್ಯವಾದ ಸ್ಥಳವಿದು. (ಈ ಬಗ್ಗೆ ಬರೆಯುವುದಾದರೆ ಒಂದು ಬ್ಲಾಗ್ ಪೋಸ್ಟ್ ಆಗುತ್ತೆ). ಇಲ್ಲಿಯ ದೇವಸ್ಥಾನದಿಂದ ಕೇವಲ ಆರು ಕಿ.ಮೀ ದೂರದಲ್ಲಿ ಈ ಜಲಪಾತವಿದೆ. ಕಳೆದ ಮೂರ್ನಾಲ್ಕು ವರ್ಷದ ವರೆಗೆ ಮಣ್ಣಿನ ರಸ್ತೆ ಇದ್ದರೂ..... ಒಳ್ಳೇ ಪ್ರೇಕ್ಷಣೀಯ ಸ್ಥಳವಾದ್ದರಿಂದ ಸರ್ಕಾರವು ಈಗೆರಡುವರ್ಷದ ಕೆಳಗೆ ರಸ್ತೆಗೆ ಟರ್ ಹಾಕಿ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಾಡಿರುತ್ತದೆ. ಶೃಂಗೇರಿಯ ಸುತ್ತ ಮುತ್ತ ಇರುವ ಸುಂದರ ಜಲಪಾತಗಳಲ್ಲಿ ಇದೂ ಒಂದು. ಅಲ್ಲಿ ಚಿತ್ರಿಸಿದ ಕೆಲವು ಚಿತ್ರಗಳನ್ನು ನಿಮಗಾಗಿ ಇಲ್ಲಿ ಪೋಸ್ಟ್ ಮಾಡಿರುತ್ತೇನೆ......

ಜಲಪಾತದ ಸಂಪೂರ್ಣ ದೃಶ್ಯ......
ಒಂದು ಬದಿಯ ದೃಶ್ಯ 1
ಒಂದು ಬದಿಯ ದೃಶ್ಯ 2
ಭೋರ್ಗರೆದು ಧುಮುಕುತ್ತಿರುವ ನೀರು.....
ಚೆನ್ನಾಗಿ ಒಂದು ಬಾಟ್ಲಿ ಎಳ್ಳೆಣ್ಣೆ ಮೈತುಂಬಾ ಹಚ್ಚಿಕೊಂಡು ಒಂದು ಗಂಟೆ ಬಿಸಿಲಿನಲ್ಲಿ ನಿಂತು ಆಮೇಲೆ ಜಲಪಾತದೆ ಕೆಳಗೆ ನಿಲ್ಲಬೇಕು ನೋಡಿ .... ಒಳ್ಳೇ ಅಭ್ಯಂಗ...
ಜಲಪಾತದ ಕೆಳಗೆ ಸ್ನಾನ ಮಾಡುತ್ತಿರುವ ಪ್ರವಾಸಿ ಹುಡುಗರು.....
ಬಂಡೆಯ ಮೇಲೆ ಧುಮುಕುತ್ತಿರುವ ನೀರು.......
ಹೋಗುವ ದಾರಿಯ ಬದಿಯಲ್ಲಿರುವ ರಮಣೀಯ ದೃಶ್ಯ... 1
ಹೋಗುವ ದಾರಿಯ ಬದಿಯಲ್ಲಿರುವ ರಮಣೀಯ ದೃಶ್ಯ... 2
ಅಸ್ತಮಿಸುತ್ತಿರುವ ಸೂರ್ಯನ ಬೆಳಕಿನ ಚೆಲ್ಲಾಟ......
ಮಲೆನಾಡಿನ ಸೌಂದರ್ಯದ ಸೊಬಗೇ ಸೊಬಗು..... ಬಣ್ಣಿಸಲು ಅಸಾಧ್ಯ.... ಅನುಭವಿಸಿಯೇ ಸವಿಯಬೇಕು..... ನೀವೂ ಕೂಡಾ ಒಮ್ಮೆ ಈ ತಾಣಕ್ಕೆ ಭೇಟಿ ಕೊಡಿ.....
(ಚಿತ್ರಗಳನ್ನು ದೊಡ್ಡದಾಗಿ ನೋಡಲು ಚಿತ್ರಗಳ ಮೇಲೆ ಕ್ಲಿಕ್ಕಿಸಿ)