Showing posts with label ನನ್ನ ಬ್ಲಾಗಿನ ಕಥೆ. Show all posts
Showing posts with label ನನ್ನ ಬ್ಲಾಗಿನ ಕಥೆ. Show all posts

Sunday, March 14, 2010

ನನ್ನ ಬ್ಲಾಗಿನ ಕಥೆ......

     ಚಿನ  ಒಂದೆರಡು ತಿಂಗಳಿನವರೆಗೂ ನನಗೆ ಬ್ಲಾಗ್ ಗಳ  ಬಗ್ಗೆ ಗೊತ್ತೇ ಇರಲಿಲ್ಲ.  ಬರೀ ಕ್ಯಾಮರ ತಗೋಂಡು ಒಂದಷ್ಟು ಫೋಟೋಗಳನ್ನು ತೆಗೆಯೋದು ಅದನ್ನ ಆಲ್ಬಂ ಮಾಡಿ ಇಂಟರ್ನೆಟ್ ನಲ್ಲಿ ಹಾಕೋದು ಸ್ನೇಹಿತರ ಜೊತೆ ಷೇರ್ ಮಾಡಿಕೊಳ್ಳೋದು ಅಷ್ಟೇ ಮಾಡ್ತಾ ಇದ್ದೆ.   ಒಂದೇ ರೀತಿಯ ಅಭ್ಯಾಸಗಳಿರುವವರು ಸ್ನೇಹಿತರಾಗುವುದು ಸಹಜ, ಅದೇರೀತಿ ಪವಿತ್ರ ಅವರು ನನಗೆ ಇಂಟರ್ನೆಟ್ ನಲ್ಲಿ ಸ್ನೇಹಿತರಾದರು.  ನಾ ತಗೆದೆ ಕೆಲವು ಚಿತ್ರಗಳನ್ನು ಅವರಿಗೆ ಕಳಿಸುತ್ತಿದ್ದೆ.  ಹೀಗೇ ಒಂದು ಸಲ ನಮ್ಮನೆ ಎದುರಿನ ಸೂರ್ಯೋದಯದ ಚಿತ್ರವನ್ನು ಕಳಿಸಿದೆ.  ಅವರು ಚನ್ನಾಗಿದೆ ಎಂದು ಹೇಳುವುದರ ಜೊತೆಗೆ ಅವರ ಸ್ನೇಹಿತ ಓಂ ಶಿವಪ್ರಕಾಶ್ ಅವರಿಗೆ ಆ ಚಿತ್ರವನ್ನು ಫಾರ್ವರ್ಡ್ ಮಾಡಿದರು.  ನನ್ನ ಆ ಚಿತ್ರದ ಜೊತೆ ಅವರ ಕವನದ ಸಾಲುಗಳು ಸೇರಿಕೊಂಡವು.  ಅದರ ಲಿಂಕನ್ನು ಪವಿತ್ರ ಅವರು ನನಗೆ ಕಳಿಸಿದಾಗಲೇ ಹೀಗೆ ಬ್ಲಾಗ್ ಅಂತ ಒಂದಿರುತ್ತೆ  ಅದರಲ್ಲಿ ನಮಗೆ ತಿಳಿದ ವಿಷಯಗಳನ್ನು ಬರೆಯಬಹುದು ಅಂತ ನನಗೆ ಗೊತ್ತಾಗುವುದರ ಜೊತೆಗೆ ಯಾವುದೋ ಹೊಸ ಪ್ರಪಂಚ ನೋಡಿದ ಅನುಭವವಾಯಿತು.  ಓಂ ಶಿವಪ್ರಕಾಶ್ ಅವರನ್ನು ಇದರ ಬಗ್ಗೆ  ಕೇಳಿದಾಗ ನೀವೂ ಒಂದು ಮಾಡಬಹುದು ಅಂತ ಸಲಹೆ ಕೊಟ್ಟಿದ್ದರು.   ಆಗಾಗ ಅವರ ಬ್ಲಾಗ್ ನೋಡೋದು ಆರ್ಟಿಕಲ್ ಗಳನ್ನ ಓದೋದು ಮತ್ತೆ ಅವರು ಇದನ್ನು ಹೇಗೆ ಮಾಡಿರಬಹುದು ಅಂತ ಯೋಚನೆ ಮಾಡೋದು ಮಾಡುತ್ತಾ ಇರುತ್ತಿದ್ದೆ.  ಅವರ ಬ್ಲಾಗ್ ಬಿಟ್ರೆ ಬೇರೆ ಬ್ಲಾಗ್ ಗಳನ್ನು ನೋಡೇ ಇರಲಿಲ್ಲ.  ನಂತರ ಸವಿತ. ಎಸ್. ಆರ್., ಪ್ರಕಾಶ್, ಮತ್ತು ಪಾಲಚಂದ್ರ ಅವರುಗಳ  ಬ್ಲಾಗ್  ಗಳನ್ನು ನೋಡುವ ಅವಕಾಶವಾಯಿತು.  ಎಲ್ಲರೂ ತುಂಬಾ ಚೆನ್ನಾಗಿ ಬರೆದಿದ್ದರು.  ನಾನಗೂ ಒಂದು ಬ್ಲಾಗ್ ಮಾಡಬೇಕು ಅಂತ ಮನಸ್ಸಿಗೆ ಬಂತು. ಆದರೆ ನಾನು ಬರೆಯಬಲ್ಲೆನೇ ?  ಬರೆಯುವುದಾದರೆ ಏನನ್ನು ಬರೆಯುವುದು ಎಂಬ ಸಂದೇಹಗಳು ನನ್ನಲ್ಲಿ ಕಾಡತೊಡಗಿತು.  ಮನಸ್ಸಿಗೆ ಬಂದ ಮೇಲೆ ಶುರು ಮಾಡಬೇಕು ಅಂತ ಬ್ಲಾಗರ್ ಡಾಟ್ ಕಾಮ್ ನಲ್ಲಿ ಲಾಗಿನ್ ಆದೆ.   ಆದಮೇಲೆ ಏನ್ಮಾಡೋದು ಅಂತನೇ ಗೊತ್ತಾಗ್ಲಿಲ್ಲ, ಒಂದೆರಡು ದಿನ ತಲೆ ಕೆಡಿಸಿಕೊಂಡ ನಂತರ ಹೀಗೆ ಮಾಡಬಹುದು ಅಂತ ಒಂದು ಯೋಚನೆ ಬಂದು  ಪ್ರಾರಂಭ ಮಾಡಿದೆ.   ನನಗೆ ನಿಮ್ಮೆಲ್ಲರ ಸಲಹೆ, ಸಹಾರ ಹಾಗೂ ಪ್ರೋತ್ಸಾಹ ದೊರೆಯುವುದೆಂದು ತಿಳಿದೆದ್ದೇನೆ.