Showing posts with label ಛಾಯಾಗ್ರಹಣ. Show all posts
Showing posts with label ಛಾಯಾಗ್ರಹಣ. Show all posts

Saturday, August 21, 2010

ಛಾಯಾಗ್ರಹಣ.......

      ಅರವಿಂದ ಅವರ ಬಜ಼್ ನಲ್ಲಿ "ಫ಼ೋಟೋಗ್ರಾಫ಼ರ್ ಗಳಿಗೆ ಒಂದು ಪ್ರಶ್ನೆ" ಎನ್ನುವ ತಲೆಬರಹದ ಅಡಿಯಲ್ಲಿ ನಡೆದ ಚರ್ಚೆ (ಫೋಟೋ ತೆಗೆದ ನಂತರ post processing ಮಾಡಬೇಕೇ ಬೇಡವೇ? ಮಾಡಬಹುದು ಅಂತಾದರೆ ಏನೇನು ಮಾಡಬಹುದು? ಫೋಟೋ ಎಡಿಟ್ ಮಾಡಿದರೆ originality ಹೋಗುತ್ತದಾ? ಫೋಟೋ ತೆಗೆಯುವಾಗಲೇ brightness/color levels ಎಲ್ಲಾ adjust ಮಾಡಿ ತೆಗೆದರೆ ಮಾತ್ರ original ಫೋಟೋ ಅನ್ನಬಹುದಾ?) ಯನ್ನು ಓದಿದ ನಂತರ ಒಂದು ಬ್ಲಾಗ್ ಬರೀಬೇಕು ಅನ್ನಿಸಿತು.......
     
     ಇದುವರೆಗೆ ಮಾಡಿದ ಛಾಯಗ್ರಹಣದ ಅನುಭವದ ಮೇಲೆ (ಇನ್ನೂ ತಿಳಿಯಬೇಕಾದ್ದು ಸುಮಾರಿದೆ) ಈ ಲೇಖನ ಬರೆಯುತ್ತಿದ್ದೇನೆ.

     Post Process ಬಗ್ಗೆ ನನಗೆ ತಿಳಿದಂತೆ  ಏನೇನು ಮಾಡಬಹುದು ಎಂದರೆ Brightness, Contrast, Colour levels, B&W, Selective Coloring, Mixing multiple pictures, HDR ಇತ್ಯಾದಿಗಳನ್ನು ಮಾಡಬಹುದು.   ಚಿತ್ರವು Bright, Dark ಅಥವಾ ಹೆಚ್ಚು Colour ಕಾಣಲು ಕ್ಯಾಮರದಲ್ಲಿ Shutter speed, Exposure compensation, Aperture, ISO ಗಳನ್ನು ಹೊಂದಿಸಿಕೊಂಡು ಚಿತ್ರಿಸಬಹುದು.  ಚಿತ್ರವನ್ನು ಕ್ರಾಪ್ ಮಾಡುವ ವಿಷಯಕ್ಕೆ ಬಂದಾಗ....  ಚಿತ್ರದಲ್ಲಿ ಮುಖ್ಯ ವಿಷಯ ಯಾವುದು......   ನಾವು ಚಿತ್ರದಲ್ಲಿ ಏನನ್ನು ತೋರಿಸಬೇಕು...... ಎಷ್ಟು ತೋರಿಸಬೇಕು...... ಎಂದು ಯೋಚಿಸಿ ಕ್ರಾಪ್ ಮಾಡುವುದು ಒಳ್ಳೆಯದು. ಕ್ರಾಪ್ ಮಾಡಬೇಕಾದ ಸಂದರ್ಭ ಎಲ್ಲಿ ಬರುತ್ತದೆ ಎಂದರೆ...... ನಮ್ಮಲ್ಲಿ Macro Lens ಇಲ್ಲದಿರುವಾಗ ಚಿಕ್ಕ ಚಿಕ್ಕ ಹೂವುಗಳ ಅಥವಾ  ಕೀಟಗಳ ಅಥವಾ ನೀರಿನ ಹನಿಯಲ್ಲಿ ಕಾಣುವ ಪ್ರತಿಬಿಂಬಗಳನ್ನು ಚಿತ್ರಿಸುವ ಆಸೆ ಇದ್ದಲ್ಲಿ ಕ್ರಾಪ್ ಮಾಡುವ ಅನಿವಾರ್ಯತೆ ಬರುತ್ತದೆ.  ಇಲ್ಲವಾದರೆ ಬರೀ Landscape ಅಥವಾ Portrait ಚಿತ್ರಗಳನ್ನು ಚಿತ್ರಿಸುವಾಗ ಕ್ರಾಪ್ ಮಾಡುವ ಅಗತ್ಯವಿರುವುದಿಲ್ಲ ಕ್ಯಾಮರಾದಲ್ಲಿ ಚೌಕಟ್ಟನ್ನು ಅಳವಡಿಸುವಾಗ ನಮಗೆ ಬೇಕಾದಷ್ಟನ್ನೇ ಅಳವಡಿಸಿಕೊಳ್ಳಬಹುದು.

     ಈ ಕೆಳಗಿನ ಚಿತ್ರವನ್ನು ಗಮನಿಸಿ ಇದರಲ್ಲಿ F-stop f/16,  Exposure time 1/160, ISO 400 ಗೆ ಇಟ್ಟುಕೊಂಡು, ಕೆಸುವಿನ ಎಲೆಯ ಮೇಲೆ ನಿಂತ ನೀರನ್ನು ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ತೆಗೆದ ಚಿತ್ರವಿದು.

ಚಿತ್ರ ೧ ಕೆಸುವಿನ ಎಲೆಯ ಮೇಲೆ ನಿಂತ ನೀರು 
(ನನ್ನ ಕ್ಯಾಮರಾದಲ್ಲಿ ಇದಕ್ಕಿಂತ ಕ್ಲೋಸ್ಅಪ್ ತೆಗೆಯಲು ಆಗುವುದಿಲ್ಲ ಎಲೆ ಚಿಕ್ಕವಿರುವುದರಿಂದ ಇಷ್ಟೇ ಕ್ಲೋಸ್ ಅಪ್ ತೆಗೆಯುವುದಕ್ಕೆ ಆಗಿದ್ದು)


     ಈ ಚಿತ್ರ ತೆಗೆಯುವಾಗ ಚೆನ್ನಾಗಿ ಬಿಸಿಲಿತ್ತು Meter Reading 1/125 ತೋರಿಸುತ್ತಿದ್ದರೂ Out Door ಆದ್ರಿಂದ ನಾನು ಒಂದೆರೆಡು Point Undre expose (1/160) ಮಾಡಿದ್ದೇನೆ.  ಹೊರಗಡೆ LCD Display ನಲ್ಲಿ ನೋಡಿದಾಗ ಚಿತ್ರವು ಸರಿಯಾಗಿ ಬಂದಿದೆ ಎಂದು ಕಂಡರೂ (ಹೊರಗಿನ ಬೆಳಕು ಜಾಸ್ತಿ ಇರುವಾಗ ಕ್ಯಾಮರ LCD ಯಲ್ಲಿ ಚಿತ್ರವು Dark ಆಗಿ ಕಾಣುವುದು ನಿಮ್ಮ ಅನುಭವಕ್ಕೂ ಬಂದಿರಬಹುದು) ಕಂಪ್ಯೂಟರ್ ನಲ್ಲಿ ನೋಡಿದಾಗ ಒಂಚೂ...ರು Over Expose ಆಗಿದೆ ಎಂದು ಅನಿಸತೊಡಗಿತು.  ಅದನ್ನು Windows Picture Manager ನಲ್ಲಿ Brightness and Contrast ಒಂಚೂ...ರು Balance ಮಾಡಿ Crop ಮಾಡಿದ ಚಿತ್ರ ಈ ಕೆಳಗಿದೆ.

ಚಿತ್ರ ೨ (ಮುತ್ತಿನ (ಅಥವಾ ಪಾದರಸದ) ಹಾಗೆ ಹೊಳೆಯುತ್ತಿರುವ ನೀರು)


     ಇಲ್ಲಿ ಎಲೆ ಹಾಗೂ ಅದರ ಮೇಲೆ ನಿಂತ ನೀರನ್ನು  ವಿಷಯವಾಗಿಟ್ಟುಕೊಂಡು ಡೆಪ್ತ್ ಕಾಣಬೇಕೆಂಬ ಉದ್ದೇಶದಿಂದ ಎಲೆಯ ಸ್ವಲ್ಪ ಭಾಗ ಹಾಗೂ ಎಲೆಯ Background ಕಾಣುವಂತೆ ಕ್ರಾಪ್ ಮಾಡಿದ್ದೇನೆ

 ಹಾಗೆಯೇ ಈ ಕೆಳಗಿನ ಚಿತ್ರವನ್ನು ಗಮನಿಸಿ.....  


      ಈ ಚಿತ್ರದ ಎಲೆಯ ಮಧ್ಯದಲ್ಲಿರುವ ನೀರಿನ ಬಿಂದುವಿನಲ್ಲಿ ಆಕಾಶ, ಸೂರ್ಯ ಹಾಗು ಗಿಡಗಳು ಪ್ರತಿಫಲಿಸುತ್ತಿವೆ .....  ಇಲ್ಲಿ ನೀರಿನ ಹನಿಯಲ್ಲಿ ಕಾಣುವ Reflection ತೋರಿಸುವ ಉದ್ದೇಶವಿರುವುದರಿಂದ ಮೂಲ ಚಿತ್ರದಲ್ಲಿ ಅದು ಸ್ಪಷ್ಟವಾಗಿ ಕಾಣದಿರುವುದರಿಂದ...... ಅಷ್ಟನ್ನು ಮಾತ್ರ ಕ್ರಾಪ್ ಮಾಡಿದ್ದೇನೆ.

ಚಿತ್ರ ೩  (ಮುತ್ತಿನ ಬಣ್ಣದ ನೀರಿನಲ್ಲಿ ಪ್ರತಿಫಲಿಸುತ್ತಿರುವ ಸೂರ್ಯ ಹಾಗೂ ಗಿಡಗಳು)


      ಈ ಕೆಳಗಿನ ಚಿತ್ರವನ್ನು ಗಮನಿಸಿ..... ಇದರಲ್ಲಿ Exposure time 1/1600, Aperture 5.6, ISO 200 ಗೆ ಅಳವಡಿಸಲ್ಪಟ್ಟಿದೆ


     ಈ ಚಿತ್ರದಲ್ಲಿ ನೀರಿನ ಬಿಂದುವನ್ನು ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡಿದ್ದೇನೆ.   Background full black ಆಗಿರದೆ ಸ್ವಲ್ಪ Brown ಆಗಿ ಕಾಣುವುದರಿಂದ ಪುನಃ Windows Picture Manager ನಲ್ಲಿ Brightness and Contrast adjust ಮಾಡಿ ಕ್ರಾಪ್ ಮಾಡಿದ ಚಿತ್ರ ಕೆಳಗಿದೆ.


     ಈ ಚಿತ್ರವನ್ನು ಮೇಲಿನ ಚಿತ್ರದಂತೆ (ಚಿತ್ರ ೩ ರಂತೆ) ಕ್ರಾಪ್ ಮಾಡಿಲ್ಲ ಏಕೆಂದರೆ ಇದರಲ್ಲಿ DOF ಚೆನ್ನಾಗಿರುವುದರಿಂದ ಅದನ್ನೂ ತೋರಿಸಬೇಕಾಗಿದೆ.  ಮೇಲಿನ ಚಿತ್ರದಂತೆ ನೀರಿನ ಹನಿಯನ್ನು ಮಾತ್ರ ಕ್ರಾಪ್ ಮಾಡಿದ್ದರೆ ಚಿತ್ರವು ತನ್ನ Background  ಹಾಗೂ DOF ಎರಡನ್ನೂ ಕಳೆದುಕೊಳ್ಳುತ್ತಿತ್ತು.

     ಕ್ಯಾಮರಾದಲ್ಲಿ ಚಿತ್ರಿಸುವುದು ಹೇಗೆ ಒಂದು ಕಲೆಯೋ..... ಹಾಗೆಯೇ Post processing ಕೂಡಾ ಒಂದು ಕಲೆ.  HDR ನಲ್ಲಿ ಬರುವ Stunning images ಗಳನ್ನು ನೀವೂಕೂಡಾ ನೋಡಿರುವಿರಿ.  HDR ಮಾಡಲು ಇಛ್ಛೆಇಲ್ಲದಿದ್ದರೆ...... ಚಿತ್ರವು ತನ್ನ ನೈಜತೆಯನ್ನು ಕಳೆದುಕೊಳ್ಳದಂತೆ Post Process ಮಾಡಬಹುದು ಎನ್ನುವುದು ನನ್ನ ಅಭಿಪ್ರಾಯ.

ನಿಮ್ಮ ಅಭಿಪ್ರಾಯಗಳನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ.....

Monday, July 12, 2010

ಪಿಕಾಸದಲ್ಲಿ ಎಡಿಟ್ ಮಾಡಿದ ಚಿತ್ರಗಳು ......

     ಇದು ಮೊನ್ನೆ ನಾನು ಕ್ಲಿಕ್ಕಿಸಿದ ಚಿತ್ರ.  ಇದನ್ನು ಮಿರರ್ ಇಮೇಜ್ ನಂತೆ ಕಾಣುವ ಹಾಗೆ ಚಿತ್ರಿಸಿದ್ದೇನೆ, ಐದು ದಳಗಳಿಗೆ ಐದು ದಳಗಳು ಒಂದು ಮೊಗ್ಗಿಗೆ ಒಂದು ಮೊಗ್ಗು ಕನ್ನಡಿಯಲ್ಲಿ ಪ್ರತಿಫಲಿಸಿದಂತೆ ಕಾಣುತ್ತದೆ.
 
      

     ಈಗ ಕಂಪ್ಯೂಟರ್ ಗಳಲ್ಲಿ ಫೋಟೋಗಳನ್ನು ಎಡಿಟ್ ಮಾಡಲು ಹಲವಾರು ಸಾಫ್ಟ್ ವೇರ್ ಗಳು ಬಂದಿರುವುದರಿಂದ ನಾವು ಒಮ್ಮೆ ತೆಗೆದ ಚಿತ್ರವನ್ನು ನಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿಕೊಳ್ಳಬಹುದು.  ಅಂತೆಯೇ ನಾನು ಕೂಡಾ ಈ ಚಿತ್ರವನ್ನು ಪಿಕಾಸ ಫೊಟೋ ಎಡಿಟರ್ ನಲ್ಲಿ ಈ ರೀತಿಯಾಗಿ ಎಡಿಟ್ ಮಾಡಿದ್ದೇನೆ.  ನೋಡುವುದಕ್ಕೆ ಏನೋ ಭಾರೀ ಕೆಲಸ ಮಾಡಿದಂತೆ ಕಾಣುತ್ತದೆ ಆದರೆ ತುಂಬಾ ಸುಲಭ ನೀವೂ ಕೂಡಾ ಪ್ರಯತ್ನಿಸಬಹುದು.  ಈ ಕೆಳಗಿನ ಚಿತ್ರವನ್ನು ನೋಡಿ.


ಈ ರೀತಿಯ ಚಿತ್ರಗಳನ್ನು ತಯಾರಿಸಲು ನೀವು ಮಾಡೇಕಾಗಿರುವುದು ಇಷ್ಟೇ.....  

1) ಎಡಿಟ್ ಮಾಡಲು ಬಯಸುವ ಚಿತ್ರವನ್ನು Picasa Photo Viewer ನಲ್ಲಿ ಓಪನ್ ಮಾಡಿಕೊಳ್ಳಿ
2) ಚಿತ್ರದ ಮೇಲೆ Right Click ಮಾಡಿ Edit in Picasa ಮೇಲೆ ಕ್ಲಿಕ್ ಮಾಡಿ
3) ಎಡಿಟ್ ವಿಂಡೋ ಓಪನ್ ಆದಮೇಲೆ ಎಡಬದಿಯಲ್ಲಿ ಮೂರು ಟ್ಯಾಬ್ ಗಳು ಕಾಣುತ್ತವೆ Basic Fixes, Tuning, Effects. 
   ಅದರಲ್ಲಿ Effects ಮೇಲೆ ಕ್ಲಿಕ್ ಮಾಡಿದರೆ ಕೆಳಗಡೆ ಹಲವಾರು Effect ಗಳು ಕಾಣುತ್ತವೆ, ಅದರಲ್ಲಿ Focal B&W ಅಂತಿರೋದ್ರ ಮೇಲೆ ಕ್ಲಿಕ್ ಮಾಡಿದರೆ ಸರಿ ಅಷ್ಟೇ.... ಚಿತ್ರ ಸಿದ್ಧವಾಗುತ್ತದೆ.  

     ಎಡಬದಿಯಲ್ಲಿ Size ಮತ್ತು Sharpness ಅಂತ ಎರಡು ಬಟನ್ ಗಳು ಇರುತ್ತವೆ ಅದರಿಂದ ನಿಮಗೆ ಬೇಕಾದ ಗಾತ್ರ ಹಾಗೂ ಶಾರ್ಪ್ ನೆಸ್ ಗಳನ್ನು ಹೊಂದಿಸಿಕೊಳ್ಳಬಹುದು.  ಚಿತ್ರದ ಮೇಲೆ ಬಂದಿರುವ  " + "  ಚಿಹ್ನೆಯನ್ನು ನೀವು  ಎಲ್ಲಿಗೆ ಚಲಿಸುತ್ತೀರೋ ಆ ಭಾಗವು ಮಾತ್ರ ನೈಜ ಬಣ್ಣವನ್ನು ಹೊಂದಿ ಉಳಿದ ಭಾಗಗಳೆಲ್ಲವೂ ಕಪ್ಪು ಬಿಳುಪು ಬಣ್ಣವನ್ನು ಹೊಂದುತ್ತದೆ.

ಇದರಂತೆ ಎಡಿಟ್ ಮಾಡಿದ ಇನ್ನೆರಡು ಚಿತ್ರಗಳು ಇಲ್ಲಿವೆ.,

ಎಡಿಟ್ ಮಾಡುವುದಕ್ಕೆ ಮೊದಲು



ಎಡಿಟ್ ಮಾಡಿದ ನಂತರ


  
ಎಡಿಟ್ ಮಾಡುವುದಕ್ಕೆ ಮೊದಲು
 
  
ಎಡಿಟ್ ಮಾಡಿದ ನಂತರ