ಇವತ್ತು ಬೆಳಿಗ್ಗೆ ಸೂರ್ಯನ ಬೆಳಕು ಈ ಹೂವಿನ ಮೇಲೆ ಬೀಳುವುದನ್ನು ನೋಡಿದೊಡನೆ ಚಿತ್ರಿಸಬೇಕೆನಿಸಿತು, ಮಧ್ಯಾಹ್ನ ಈ ಚಿತ್ರಕ್ಕೊಂದು ಕವನ ಬರೆಯಬೇಕೆನಿಸಿತು.... ಎರಡನ್ನೂ ಮಾಡಿರುವೆ ಹೇಗಿದೆ ಎಂದು ತಿಳಿಸಿ....
ಓ ರವಿಯೇ.......
ಈ ಚಳಿಗಾಲದ
ಚಳಿಯಲ್ಲಿ
ಚಂದಿರನ ಬೆಳಕಿನಲಿ
ಚುಮು ಚುಮು ಎಂದು
ಮೈ ಚುಂಗರಿಸಲು
ಮಳೆ ಹೊಯ್ದಂತೆ
ಇಬ್ಬನಿ ಸುರಿದರೂ......
ಬೆಳಗಾಗುವವರೆಗೆ
ನಿನ್ನ ಬೆಚ್ಚನೆಯ
ಕಿರಣಗಳ ಚುಂಬನಕೆ
ಹಾತೊರೆದು ಕುಳಿತಿದ್ದ
ನನ್ನನ್ನು
ಯಾರ ಅಡೆ ತಡೆಯೂ ಇಲ್ಲದೇ
ಕಡೆಗೂ ನೀ ಬಂದು
ಚುಂಬಿಸಿದೆಯಾ......
Photo Exif :- Shutter Speed 1/1000, Aperture f/5.6, ISO 500, Focal Length 105 mm. ಯಾವುದೇ ರೀತಿಯ P.P ಮಾಡಿಲ್ಲ ಹೇಗೆ ಕ್ಲಿಕ್ಕಿಸಿದೆನೋ ಹಾಗೇ ಹಾಕಿರುವೆ, ಹೂವಿನ ಮೇಲಿನ ಸೂರ್ಯನ ಬೆಳಕಿನಾಟ ಇಷ್ಟವಾಯಿತು.
