ಕೆಲ ದಿನಗಳಿಂದ ಕಾದು
ಕಾದು....
ಮನದಾಳದಿಂದ
ಬಂದ
ಮಾತೊಂದ
ಹೇಳಲೇಬೇಕೆಂದು......
ನಾ... ಹೇಳ ಬಂದೆ......
ನಿನ್ನ ಮುಂದೆ......
ತೊದಲುತ್ತಿದ್ದ ನಾಲಿಗೆಯನು
ಒಣಗುತ್ತಿದ್ದ ತುಟಿಗಳನು
ಢವ ಢವನೆ ಹೊಡೆದುಕೊಳ್ಳುತ್ತಿದ್ದ
ಹೃದಯವನು
ನಡುಗುತ್ತಿದ್ದ ಕೈ ಕಾಲುಗಳನು ಸಂತೈಸಿಕೊಂಡು......
ಹೇಳ ಹೊರಟಾಗ......
ನಿನ್ನಣ್ಣ ಬಂದು ನಿಂದ......
ನಿನ್ನ ಹಿಂದೆ.......