Saturday, July 31, 2010

ಈಡೇರಿದ ಆಸೆ......

      ಜೋರು ಮಳೆಗಾಲದಲ್ಲಿ ಒಂದ್ಸಲ ಆಗುಂಬೆಗೆ ಹೋಗಬೇಕು ಅನ್ನೋ ಬಯಕೆ ಎರಡು ವರ್ಷಗಳಿಂದ ನನ್ನನ್ನು ಕಾಡುತ್ತಾ ಇತ್ತು.  ಆದ್ರೆ.. ಕಳೆದ ವರ್ಷ ಆಗಲಿಲ್ಲ.  ಈ ವರ್ಷ ಹೋಗಲೇ ಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದೆ. ಅದಕ್ಕೆ ಸರಿಯಾಗಿ ಪುಷ್ಯ ಮಳೆ ಪ್ರಾರಂಭವಾದಾಗಿನಿಂದ ಒಂದೇ ಸಮನೆ ಬರ್ತಾ ಇತ್ತು.  ಸಾಧಾರಣವಾಗಿ ಹತ್ತು ದಿನದಿಂದ ನಾನ್ ಸ್ಟಾಪ್ ಆಗಿ ಸುರಿತಾ ಇದೆ.. ಆದ್ರೆ ತೀವ್ರತೆ ಇಲ್ಲ.  ಮೊನ್ನೆ ಬುಧವಾರ ಬೆಳಗ್ಗೆ ಒಂದು ಸಾಧಾರಣವಾದ ನೆರೆ ಬಂದಿತ್ತು ನಮ್ಮೂರಿನಿಂದ ಶೃಂಗೇರಿಗೆ ನೆಡೆದುಕೊಂಡು ಹೋಗುವ ದಾರಿಯಲ್ಲಿ ತುಂಗೆ ಅಡಿ ಇಟ್ಟಿದ್ದರಿಂದ ಮಾಮೂಲಿ ನಡೆದು ಹೋಗೋ ದಾರಿಲಿ ಹೋಗೋಕೆ ಆಗುತ್ತಾ ಇರಲಿಲ್ಲ.  ನನ್ನ ಗೆಳೆಯ ಶ್ರೀನಿವಾಸ ಬೆಂಗಳೂರಿನಿಂದ ಬಂದಿದ್ದ.  ಬೆಳಿಗ್ಗೆ ತಿಂಡಿಗೆ ಮಧ್ಯಾನ ಊಟಕ್ಕೆ ನಮ್ಮನೆಗೆ ಬರಲು ಹೇಳಿದ್ದೆ.  ನಂದು ಸಂಧ್ಯಾವಂದನೆ ಜಪ ಎಲ್ಲ ಮುಗಿಸಿಕೊಂಡು ಇಬ್ಬರೂ ಒಟ್ಟಿಗೆ ತಿಂಡಿಗೆ ಕೂತಾಗ ಆಗುಂಬೆಗೆ ಹೋಗುವ ಪ್ರಸ್ತಾಪ ಬಂತು.   ಮಳೆ ಜೋರಾಗಿದ್ದರಿಂದ ಬೈಕ್ ನಲ್ಲಿ ಹೋಗೋಕೆ ರಗಳೆ, ಕ್ಯಾಮರಾ ತಗೋಂಡು ಹೋಗೋಕೆ ಆಗೊಲ್ಲ ಅಂತ ಬಸ್ ನಲ್ಲಿ ಹೋಗೋದು ಅಂತ ಪ್ಲಾನ್ ಮಾಡಿದ್ವಿ.  ಮಧ್ಯಾಹ್ನ 12:30 ಕ್ಕೆ ಊಟ ಮಾಡಿ 1:30 ಉಡುಪಿ ಮಿನಿ ಬಸ್ ಏರಿದ್ದೂ ಆಯ್ತು.  ಸಾಧಾರಣ 2:30 ಹೊತ್ತಿಗೆ ಆಗುಂಬೆ ಘಾಟಿಯಲ್ಲಿ ನಮ್ಮನ್ನು ಇಳಿಸಿದ.  ಬಸ್ ಇಳಿದ ಕೂಡಲೇ ಪ್ರಕೃತಿಯ ಸೌಂದರ್ಯವನ್ನು ನೋಡಿ ಬೆರಗಾಗಿ ಹೋದೆ.  ಮಳೆ ಮೋಡಗಳು, ಗಾಳಿ, ಮಳೆ, ಕಾಡು, ಗುಡ್ಡ, ಅಬ್ಬಾ...... ಒಂದು ಕಡೆ ಪ್ರಕೃತಿಯ ಸೌಂದರ್ಯ ನೋಡಿದ ಸಂತೋಷ..... ಇನ್ನೊಂದು ಕಡೆ ಎರಡು ವರ್ಷಗಳ ಆಸೆ ನೆರವೇರಿತು ಎನ್ನುವ ಸಂತೋಷ.  ಒಟ್ಟಿನಲ್ಲಿ ಸಂತೋಷದ ಮೇಲೆ ಸಂತೋಷ.......
     
     ನಿಮ್ಮ ಸಂತೋಷಕ್ಕಾಗಿ ........ ಅಲ್ಲಿ ಸೆರೆ ಹಿಡಿದ ಕೆಲವು ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ......  ಒಮ್ಮೆ ಮಳೆಗಾಲದಲ್ಲಿ ಆಗುಂಬೆಗೆ ಭೇಟಿ ನೀಡುವ ಪ್ಲಾನ್ ಮಾಡಿ......

ದಕ್ಷಿಣದ ಚಿರಾಪುಂಜಿ ಆಗುಂಬೆಗೆ ಸ್ವಾಗತಿಸುವ ಸ್ವಾಗತ ಫಲಕಗಳು



 ಆಗುಂಬೆಯ ಚೆಕ್ ಪೋಸ್ಟ್
 
ಚೆಕ್ ಪೋಸ್ಟ್ ಎದುರಿಗಿರುವ ಕೆರೆ, ಭಾವಿ ಹಾಗೂ ನೀರಿನ ತೊಟ್ಟಿ 

ಕೆರೆಯ ದಡದಲ್ಲಿ ಕುಳಿತಿರುವ ಬಾತುಕೋಳಿ


ಬಸ್ ಇಳಿದ ಕೂಡಲೇ ನಮ್ಮನ್ನು ಸ್ವಾಗತಿಸಿದ ಅನಾನಸ್ ಮಾರುವ ಹುಡುಗ...

ಹಾಗೂ... ಚರ್ಮುರಿ ಮಾರುವ ಅಜ್ಜ

ಹಗಲು ಕುರುಡು ಅನ್ನುತ್ತೀರಾ...???  ಖಂಡಿತಾ ಅಲ್ಲ... ದಾರಿಯೇ ಕಾಣದಷ್ಟು ಮೋಡಗಳು ಕವಿದಿರುವಾಗ... ಲೈಟ್ ಹಾಕಿಕೊಳ್ಳದೇ ವಾಹನಗಳನ್ನು ಓಡಿಸಲಾಗುದೇ ಇಲ್ಲ...!!


ಸಮೃದ್ಧವಾಗಿ ಬೀಳುವ ಮಳೆಗೆ ಸಮೃದ್ಧವಾಗಿ ಚಿಗುರಿದ ಗುಡ್ಡದ ಮೇಲಿನ ಹುಲ್ಲುಗಳು..


ನೂರಾರು ಜನರನು ಹೊತ್ತು.. ಆಗುಂಬೆಯ ಪ್ರಸಿದ್ಧ ಸೂರ್ಯಾಸ್ತವನ್ನು ತೋರಿಸುವ ಸ್ಥಳ.. ಮೋಡ ಕವಿದು ನಿರ್ಜನವಾಗಿರುವುದು.

ನನ್ನನ್ನು ಬೀಳಿಸಿ ಬಿಟ್ಟಿದ್ದಾರೆ.... ಯಾರಾದರೂ ನಿಲ್ಲಿಸಬಾರದೇ..??

ಕಾಡಿನೊಳಗೆ ನುಗ್ಗಿ ಬರುತ್ತಿರುವ ಮೋಡಗಳು...

ಆಗಸದಲಿ ಚಿತ್ತಾರ ಬಿಡಿಸಿದ ಮರಗಳು... ಚಿತ್ರ 1..

ಚಿತ್ರ 2..

ಕಾಡು, ಮೋಡ, ಘಾಟಿರಸ್ತೆ... ಚಿತ್ರ 1..

ಕಾಡು, ಮೋಡ, ಘಾಟಿರಸ್ತೆ... ಚಿತ್ರ 2..

ಪ್ರಕೃತಿಯ ಮಡಿಲಲ್ಲಿ ನನ್ನ ಗೆಳೆಯ ಶ್ರೀನಿವಾಸ್.....


ಆಗುಂಬೆ ಘಾಟಿ ಮೇಲೇರಿ ಬರುತ್ತಿರುವ ಅನ್ನಪೂರ್ಣೇಶ್ವರಿ...

ಒಮ್ಮೆಲೆ... ಮೇಲೇರಿ ಬರುತ್ತಿರುವ ಮಳೆ ಮೋಡಗಳು....!!!

ಮೋಡಗಳ ಚಿತ್ರ ಸೆರೆಹಿಡಿಯುತ್ತಿರುವ ಶ್ರೀನಿವಾಸ...

ಮಳೆ ಸುರಿಸಿ ನೀರಾಗಿಹೋದ ಮೋಡವನೆಲ್ಲಿ ಹುಡುಕಲಿ....??

ನನಗೂ... ಹೀಗೇ.... ಮರದ ರೀತಿ ಮೌನವಾಗಿ ನಿಲ್ಲುವಾಸೆ.....

ಆಗುಂಬೆ ಘಾಟಿಯಲ್ಲಿ ಒಟ್ಟು 14 ತಿರುವುಗಳಿವೆ, ನಾವು 6 ತಿರುವು ಕೆಳಗಿಳಿದು ಹಿಂತಿರುಗುತ್ತಿರುವುದು....

ZUUPP....... ಎಂದು ಬಂದ ಬಸ್...   :)

ಈ ಬೋರ್ಡ್ ನೋಡಿದ ಮೇಲೇ..... ಕ್ಯಾಮರಾದಿಂದ ಕಣ್ಣು ಹೊರಗೆ ಬಂದಿದ್ದು...   :)
ಎಲ್ಲವೂ ಮೋಡದ ಮಯ.... ಈ ಮರ ಗಿಡಗಳಂತೆ ನಾನು ಹಾಗೂ ನನ್ನ ನೈಕಾನ್ ಕೂಡಾ....  :)

ಮತ್ತೊಂದು ಸಲ... ZUUPP...

ಕಸದ ತೊಟ್ಟಿಗೂ ಹಾಲುಣಿಸುತ್ತಿರುವ ಪ್ರಕೃತಿ ಮಾತೆ....!!
(ಗುಡ್ಡದ ಮೇಲಿನಿಂದ ಧುಮುಕುತ್ತಿರುವ ಜಲಧಾರೆ) ಚಿತ್ರ 1..

ಚಿತ್ರ 2..

ಚಿತ್ರ 3..

ಕಾಡಿನಲ್ಲೂ ಕನ್ನಡದ ಕವಿ.....

ಆಗುಂಬೆಯ ಅತಿಥಿ ಗೃಹ


ನೆನಪಿದೆಯೇ....??   ಶಾಲೆಗೆ ಹೋಗುವಾಗ ಆಡಿದ ಕೊಕ್ಕೋ.. ಆಟ...??

ವಾಲೀ ಬಾಲಿನಾಟ... ಚಿತ್ರ 1..

ವಾಲೀ ಬಾಲಿನಾಟ... ಚಿತ್ರ 2..

ಊರೊಳಗಿನ ಒಂದು ದೃಶ್ಯ...

ಊರೊಳಗೂ ಬಿಡದೇ ಕವಿದಿರುವ ಮೋಡಗಳು...

ಆಗುಂಬೆಯ B.S.N.L. ಕಛೇರಿ.....    :)

ಈ ಚಿತ್ರಕ್ಕೆ ತಲೆ ಬರಹ ಬೇಡ....

ಆಗುಂಬೆ ಬಸ್ ನಿಲ್ದಾಣ...

ಬಸ್ ನಿಲ್ದಾಣದ ಒಂದು ದೃಶ್ಯ...

L.I.C., ಯಲ್ಲಿ ಚೆನ್ನಾಗಿ ಹಣ ಹೂಡಿಸಿ ಆಗುಂಬೆಯಂತಹಾ ಊರಿನಲ್ಲಿ     ಇರುವುದಾದರೆ ಜೀವನವು ಆನಂದವಾಗಿರುತ್ತದೆ...

     
     ಆಗುಂಬೆ ಘಾಟಿಯಿಂದ ಬಸ್ ಸ್ಟ್ಯಾಂಡಿನವರೆಗೂ (ಸುಮಾರು 2.5 km) ಊರನ್ನು ಸರ್ವೇ ಮಾಡುತ್ತಾ (ಕ್ಯಾಮೆರಾ ಕಣ್ಣಿನಲ್ಲಿ) ಬಸ್ ನಿಲ್ದಾಣ ಸೇರುವಹೊತ್ತಿಗೆ 6:15 ಆಗಿತ್ತು ಒಂದು ಹತ್ತು ನಿಮಿಷದಲ್ಲೇ ನಮ್ಮನ್ನು ಕರೆದುಕೊಂಡು ಹೋದ ಬಸ್ಸು ಉಡುಪಿಗೆ ಹೋಗಿ ವಾಪಸ್ ಬಂದಿತ್ತು ಅದರಲ್ಲಿ ಶೃಂಗೇರಿಗೆ ಹಿಂದಿರುಗಿದೆವು, ನನ್ನಾಸೆಯು ಈಡೇರಿತ್ತು :)   ಆದರೆ ನನ್ನ ಕ್ಯಾಮೆರಾ ಸಂಪೂರ್ಣ ಒದ್ದೆಯಾಗಿತ್ತು  :(

ನೀವೂ ಒಮ್ಮೆ ಭೇಟಿ ಕೊಡುವಿರಿ ತಾನೇ....??  
ನಿಮ್ಮ ಅನಿಸಿಕೆಗಳಿಗೆ ಸ್ವಾಗತ................

11 comments:

  1. ಗುರುಪ್ರಸಾದ್ ಸರ್,
    ಆಗುಂಬೆಯ ಚಿತ್ರಗಳನ್ನು ನೋಡಿ ಈಗಲೇ ಊರಿಗೆ ಓದಿ ಬರುವ ಹುಚ್ಚು ಜಾಸ್ತಿ ಆಗ್ತಾ ಇದೆ! ಈ ತಿಂಗಳು ಊರಿಗೆ ಬಂದಾಗ ಆಗುಂಬೆಗೆ ಖಂಡಿತಾ ಹೋಗ್ತೇನೆ.
    ಅಂದ ಹಾಗೆ ನಮ್ಮ ಮಾಸ್ತಿಕಟ್ಟೆ-ಹುಲಿಕಲ್ ಘಾಟಿಯ ದೃಶ್ಯವೂ ಹೀಗೆ ಮೈ ನವಿರೇಳಿಸುತ್ತದೆ, ಒಮ್ಮೆ ನಮ್ಮೂರಿಗೆ ಹೋಗಿಬನ್ನಿ.......

    ReplyDelete
  2. ಆಗುಂಬೆಗೆ ಹೋಗಿ ಬಂದಷ್ಟೇ ಸಂತೋಷ ಆಯಿತು :)

    ಫೋಟೋಗಳು ಸೂಪರ್...

    ReplyDelete
  3. @ ಮನದಾಳದಿಂದ, ಬೆಳದಿಂಗಳಿಗೆ ಸ್ವಾಗತ, ನಿಮ್ಮೂರಿನ ನೈಸರ್ಗಿಕ ದೃಶ್ಯವನ್ನೂ ಸೆರೆ ಹಿಡಿವ ಆಸೆ ಇದೆ, ಖಂಡಿತಾ ಹೋಗುತ್ತೇನೆ ನಮ್ಮೂರಿಂದ ಜಾಸ್ತಿ ದೂರವೇನಿಲ್ಲವಲ್ಲ..!!

    @ ಅರವಿಂದ, ನೀವು ಬೆಳದಿಂಗಳಲ್ಲಿ ಹಲವುದಿನಗಳಿಂದ ಸುಳಿದಾಡಿದರೂ... ಸುಳಿದಾಡಿದ ಗುರುತುಗಳಿರಲಿಲ್ಲ ಇಂದು ಆ ಗುರುತು ಸಿಕ್ಕಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  4. very good photos and presentation. keep it up guru.

    ReplyDelete
  5. ಮಳೆಗಾಲದ ಆಗುಂಬೆಯ ಸುಂದರ ಚಿತ್ರಗಳನ್ನು ಮುಂದಿಟ್ಟಿದ್ದೀರಿ.. ಕೆಳದಿ, ತೀರ್ಥಹಳ್ಳಿ, ಜೋಗ ನೋಡಿ ಇವತ್ತಷ್ಟೆ ಬೆಂಗಳೂರಿಗೆ ಬಂದೆ. ಏನೋ ಕಳೆದುಕೊಂಡ ಭಾವನೆ.. ಮಳೆಗಾಲದ ಶೃಂಗೇರಿ, ಆಗುಂಬೆ ಭೇಟಿ ಇನ್ನೂ ಉಳಿದಿದೆ.. ಆದಷ್ಟು ಬೇಗ ಹೊರಡಬೇಕು.

    ReplyDelete
  6. ಶಂಕರ್ ಅವರಿಗೆ ಧನ್ಯವಾದಗಳು,
    ಫಾಲ ಅವರೆ... ಮುಂದಿನ ವಾರ ನಾನು ಉದ್ಯಾನ ನಗರಿಯಲ್ಲಿರುತ್ತೇನೆ... :) ನೀವು ಶೃಂಗೇರಿಗೆ ಬರುವುದು ಯಾವಾಗ ತಿಳಿಸಿ.... :)

    ReplyDelete
  7. Guru all snaps r really really superb.. If i had come to sringeri,, definitely u wud hav taken me 2.. Im really regretting now..

    ReplyDelete
  8. ಗುರು,
    ಒಳ್ಳೆಯ ಚಿತ್ರಗಳು!
    ನಾನು ಆಗಸ ರಚ್ಚೆ ಹಿಡಿಯುತ್ತಿದ್ದಂತಹ ಜುಲೈ ೧೫ ರಂದು ಶೃಂಗೇರಿಯಿಂದ ಇದೆ ಮಾರ್ಗವಾಗಿ ಉಡುಪಿಗೆ ಬಂದೆ. ಆಗುಂಬೆಯಲ್ಲಿ ಇಳಿಯಲಿಲ್ಲವಾದರೂ ನೀವು ತಿಳಿಸಿದ ಅನುಭವ ಸಂಕ್ಷಿಪ್ತರೂಪದಲ್ಲಿ ಆಯಿತು! ಖುಶಿಯಾಯಿತು..

    ReplyDelete
  9. wonderful photo.... naanoo ade rasteyalli sivamoggege hogidde.... aadre photo tegeyalu aagiralilla.... sundara photo gaagi dhanyavaada.....

    ReplyDelete
  10. wow..nice photos..photo nodi aagumbe ge hogi bandashte kushi aaytu..next time nodlebeku :)

    ReplyDelete