ನಾನರಿವ ಮೊದಲೇ......
ನೀ ಬಂದುನನ್ನ ಮನದಲ್ಲಿ ನಿಂದೆ......
ಹೃದಯಾಂತರಾಳದಿಂದ ಬಂದ
ಭಾವಗಳು
ಕಟ್ಟಿದ
ಕನಸುಗಳ
ನನಸಾಗಿಸಲು......
ನಾ......
ನಿನ್ನ
ಪ್ರೀತಿಸುವೆನೆಂದೆ......
ನೀನಾದರೋ......
ನಾಚಿ.......
ನಕ್ಕು......
ತಲೆಬಗ್ಗಿ.......
ನನ್ನೆದುರಿಂದ ಮೌನವಾಗಿ
ಮರೆಯಾದೆ.....
ಮೌನದ ಅರ್ಥವನ್ನರಿತ
ನಾನು
ಹುಚ್ಚನಾದೆ......
("ಮೌನಂ ಸಮ್ಮತಿ ಲಕ್ಷಣಂ" ಅಂದರೆ ಮೌನವು ಒಪ್ಪಿಗೆಯ ಲಕ್ಷಣವೆಂದು ಅರ್ಥ)