ಅರವಿಂದ ಅವರ ಬಜ಼್ ನಲ್ಲಿ "ಫ಼ೋಟೋಗ್ರಾಫ಼ರ್ ಗಳಿಗೆ ಒಂದು ಪ್ರಶ್ನೆ" ಎನ್ನುವ ತಲೆಬರಹದ ಅಡಿಯಲ್ಲಿ ನಡೆದ ಚರ್ಚೆ (ಫೋಟೋ ತೆಗೆದ ನಂತರ post processing ಮಾಡಬೇಕೇ ಬೇಡವೇ? ಮಾಡಬಹುದು ಅಂತಾದರೆ ಏನೇನು ಮಾಡಬಹುದು? ಫೋಟೋ ಎಡಿಟ್ ಮಾಡಿದರೆ originality ಹೋಗುತ್ತದಾ? ಫೋಟೋ ತೆಗೆಯುವಾಗಲೇ brightness/color levels ಎಲ್ಲಾ adjust ಮಾಡಿ ತೆಗೆದರೆ ಮಾತ್ರ original ಫೋಟೋ ಅನ್ನಬಹುದಾ?) ಯನ್ನು ಓದಿದ ನಂತರ ಒಂದು ಬ್ಲಾಗ್ ಬರೀಬೇಕು ಅನ್ನಿಸಿತು.......
ಇದುವರೆಗೆ ಮಾಡಿದ ಛಾಯಗ್ರಹಣದ ಅನುಭವದ ಮೇಲೆ (ಇನ್ನೂ ತಿಳಿಯಬೇಕಾದ್ದು ಸುಮಾರಿದೆ) ಈ ಲೇಖನ ಬರೆಯುತ್ತಿದ್ದೇನೆ.
Post Process ಬಗ್ಗೆ ನನಗೆ ತಿಳಿದಂತೆ ಏನೇನು ಮಾಡಬಹುದು ಎಂದರೆ Brightness, Contrast, Colour levels, B&W, Selective Coloring, Mixing multiple pictures, HDR ಇತ್ಯಾದಿಗಳನ್ನು ಮಾಡಬಹುದು. ಚಿತ್ರವು Bright, Dark ಅಥವಾ ಹೆಚ್ಚು Colour ಕಾಣಲು ಕ್ಯಾಮರದಲ್ಲಿ Shutter speed, Exposure compensation, Aperture, ISO ಗಳನ್ನು ಹೊಂದಿಸಿಕೊಂಡು ಚಿತ್ರಿಸಬಹುದು. ಚಿತ್ರವನ್ನು ಕ್ರಾಪ್ ಮಾಡುವ ವಿಷಯಕ್ಕೆ ಬಂದಾಗ.... ಚಿತ್ರದಲ್ಲಿ ಮುಖ್ಯ ವಿಷಯ ಯಾವುದು...... ನಾವು ಚಿತ್ರದಲ್ಲಿ ಏನನ್ನು ತೋರಿಸಬೇಕು...... ಎಷ್ಟು ತೋರಿಸಬೇಕು...... ಎಂದು ಯೋಚಿಸಿ ಕ್ರಾಪ್ ಮಾಡುವುದು ಒಳ್ಳೆಯದು. ಕ್ರಾಪ್ ಮಾಡಬೇಕಾದ ಸಂದರ್ಭ ಎಲ್ಲಿ ಬರುತ್ತದೆ ಎಂದರೆ...... ನಮ್ಮಲ್ಲಿ Macro Lens ಇಲ್ಲದಿರುವಾಗ ಚಿಕ್ಕ ಚಿಕ್ಕ ಹೂವುಗಳ ಅಥವಾ ಕೀಟಗಳ ಅಥವಾ ನೀರಿನ ಹನಿಯಲ್ಲಿ ಕಾಣುವ ಪ್ರತಿಬಿಂಬಗಳನ್ನು ಚಿತ್ರಿಸುವ ಆಸೆ ಇದ್ದಲ್ಲಿ ಕ್ರಾಪ್ ಮಾಡುವ ಅನಿವಾರ್ಯತೆ ಬರುತ್ತದೆ. ಇಲ್ಲವಾದರೆ ಬರೀ Landscape ಅಥವಾ Portrait ಚಿತ್ರಗಳನ್ನು ಚಿತ್ರಿಸುವಾಗ ಕ್ರಾಪ್ ಮಾಡುವ ಅಗತ್ಯವಿರುವುದಿಲ್ಲ ಕ್ಯಾಮರಾದಲ್ಲಿ ಚೌಕಟ್ಟನ್ನು ಅಳವಡಿಸುವಾಗ ನಮಗೆ ಬೇಕಾದಷ್ಟನ್ನೇ ಅಳವಡಿಸಿಕೊಳ್ಳಬಹುದು.
ಈ ಕೆಳಗಿನ ಚಿತ್ರವನ್ನು ಗಮನಿಸಿ ಇದರಲ್ಲಿ F-stop f/16, Exposure time 1/160, ISO 400 ಗೆ ಇಟ್ಟುಕೊಂಡು, ಕೆಸುವಿನ ಎಲೆಯ ಮೇಲೆ ನಿಂತ ನೀರನ್ನು ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ತೆಗೆದ ಚಿತ್ರವಿದು.
ಚಿತ್ರ ೧ ಕೆಸುವಿನ ಎಲೆಯ ಮೇಲೆ ನಿಂತ ನೀರು
(ನನ್ನ ಕ್ಯಾಮರಾದಲ್ಲಿ ಇದಕ್ಕಿಂತ ಕ್ಲೋಸ್ಅಪ್ ತೆಗೆಯಲು ಆಗುವುದಿಲ್ಲ ಎಲೆ ಚಿಕ್ಕವಿರುವುದರಿಂದ ಇಷ್ಟೇ ಕ್ಲೋಸ್ ಅಪ್ ತೆಗೆಯುವುದಕ್ಕೆ ಆಗಿದ್ದು)
ಈ ಚಿತ್ರ ತೆಗೆಯುವಾಗ ಚೆನ್ನಾಗಿ ಬಿಸಿಲಿತ್ತು Meter Reading 1/125 ತೋರಿಸುತ್ತಿದ್ದರೂ Out Door ಆದ್ರಿಂದ ನಾನು ಒಂದೆರೆಡು Point Undre expose (1/160) ಮಾಡಿದ್ದೇನೆ. ಹೊರಗಡೆ LCD Display ನಲ್ಲಿ ನೋಡಿದಾಗ ಚಿತ್ರವು ಸರಿಯಾಗಿ ಬಂದಿದೆ ಎಂದು ಕಂಡರೂ (ಹೊರಗಿನ ಬೆಳಕು ಜಾಸ್ತಿ ಇರುವಾಗ ಕ್ಯಾಮರ LCD ಯಲ್ಲಿ ಚಿತ್ರವು Dark ಆಗಿ ಕಾಣುವುದು ನಿಮ್ಮ ಅನುಭವಕ್ಕೂ ಬಂದಿರಬಹುದು) ಕಂಪ್ಯೂಟರ್ ನಲ್ಲಿ ನೋಡಿದಾಗ ಒಂಚೂ...ರು Over Expose ಆಗಿದೆ ಎಂದು ಅನಿಸತೊಡಗಿತು. ಅದನ್ನು Windows Picture Manager ನಲ್ಲಿ Brightness and Contrast ಒಂಚೂ...ರು Balance ಮಾಡಿ Crop ಮಾಡಿದ ಚಿತ್ರ ಈ ಕೆಳಗಿದೆ.
ಚಿತ್ರ ೨ (ಮುತ್ತಿನ (ಅಥವಾ ಪಾದರಸದ) ಹಾಗೆ ಹೊಳೆಯುತ್ತಿರುವ ನೀರು)
ಇಲ್ಲಿ ಎಲೆ ಹಾಗೂ ಅದರ ಮೇಲೆ ನಿಂತ ನೀರನ್ನು ವಿಷಯವಾಗಿಟ್ಟುಕೊಂಡು ಡೆಪ್ತ್ ಕಾಣಬೇಕೆಂಬ ಉದ್ದೇಶದಿಂದ ಎಲೆಯ ಸ್ವಲ್ಪ ಭಾಗ ಹಾಗೂ ಎಲೆಯ Background ಕಾಣುವಂತೆ ಕ್ರಾಪ್ ಮಾಡಿದ್ದೇನೆ
ಹಾಗೆಯೇ ಈ ಕೆಳಗಿನ ಚಿತ್ರವನ್ನು ಗಮನಿಸಿ.....
ಈ ಚಿತ್ರದ ಎಲೆಯ ಮಧ್ಯದಲ್ಲಿರುವ ನೀರಿನ ಬಿಂದುವಿನಲ್ಲಿ ಆಕಾಶ, ಸೂರ್ಯ ಹಾಗು ಗಿಡಗಳು ಪ್ರತಿಫಲಿಸುತ್ತಿವೆ ..... ಇಲ್ಲಿ ನೀರಿನ ಹನಿಯಲ್ಲಿ ಕಾಣುವ Reflection ತೋರಿಸುವ ಉದ್ದೇಶವಿರುವುದರಿಂದ ಮೂಲ ಚಿತ್ರದಲ್ಲಿ ಅದು ಸ್ಪಷ್ಟವಾಗಿ ಕಾಣದಿರುವುದರಿಂದ...... ಅಷ್ಟನ್ನು ಮಾತ್ರ ಕ್ರಾಪ್ ಮಾಡಿದ್ದೇನೆ.
ಚಿತ್ರ ೩ (ಮುತ್ತಿನ ಬಣ್ಣದ ನೀರಿನಲ್ಲಿ ಪ್ರತಿಫಲಿಸುತ್ತಿರುವ ಸೂರ್ಯ ಹಾಗೂ ಗಿಡಗಳು)
ಈ ಕೆಳಗಿನ ಚಿತ್ರವನ್ನು ಗಮನಿಸಿ..... ಇದರಲ್ಲಿ Exposure time 1/1600, Aperture 5.6, ISO 200 ಗೆ ಅಳವಡಿಸಲ್ಪಟ್ಟಿದೆ
ಈ ಚಿತ್ರದಲ್ಲಿ ನೀರಿನ ಬಿಂದುವನ್ನು ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡಿದ್ದೇನೆ. Background full black ಆಗಿರದೆ ಸ್ವಲ್ಪ Brown ಆಗಿ ಕಾಣುವುದರಿಂದ ಪುನಃ Windows Picture Manager ನಲ್ಲಿ Brightness and Contrast adjust ಮಾಡಿ ಕ್ರಾಪ್ ಮಾಡಿದ ಚಿತ್ರ ಕೆಳಗಿದೆ.
ಈ ಚಿತ್ರವನ್ನು ಮೇಲಿನ ಚಿತ್ರದಂತೆ (ಚಿತ್ರ ೩ ರಂತೆ) ಕ್ರಾಪ್ ಮಾಡಿಲ್ಲ ಏಕೆಂದರೆ ಇದರಲ್ಲಿ DOF ಚೆನ್ನಾಗಿರುವುದರಿಂದ ಅದನ್ನೂ ತೋರಿಸಬೇಕಾಗಿದೆ. ಮೇಲಿನ ಚಿತ್ರದಂತೆ ನೀರಿನ ಹನಿಯನ್ನು ಮಾತ್ರ ಕ್ರಾಪ್ ಮಾಡಿದ್ದರೆ ಚಿತ್ರವು ತನ್ನ Background ಹಾಗೂ DOF ಎರಡನ್ನೂ ಕಳೆದುಕೊಳ್ಳುತ್ತಿತ್ತು.
ಕ್ಯಾಮರಾದಲ್ಲಿ ಚಿತ್ರಿಸುವುದು ಹೇಗೆ ಒಂದು ಕಲೆಯೋ..... ಹಾಗೆಯೇ Post processing ಕೂಡಾ ಒಂದು ಕಲೆ. HDR ನಲ್ಲಿ ಬರುವ Stunning images ಗಳನ್ನು ನೀವೂಕೂಡಾ ನೋಡಿರುವಿರಿ. HDR ಮಾಡಲು ಇಛ್ಛೆಇಲ್ಲದಿದ್ದರೆ...... ಚಿತ್ರವು ತನ್ನ ನೈಜತೆಯನ್ನು ಕಳೆದುಕೊಳ್ಳದಂತೆ Post Process ಮಾಡಬಹುದು ಎನ್ನುವುದು ನನ್ನ ಅಭಿಪ್ರಾಯ.
ನಿಮ್ಮ ಅಭಿಪ್ರಾಯಗಳನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ.....






Superb post.. I liked it very much..:)
ReplyDeleteThis comment has been removed by the author.
ReplyDeleteಸರ್
ReplyDeleteತುಂಬಾ ಚೆನ್ನಾಗಿ ಫೋಟೋ ಕಲೆಯನ್ನು ತಿಳಿಸಿದ್ದಿರಿ
ಬಹಳ ಇಷ್ಟವಾಯಿತು ಬರಹ
Super agi ide photos. yentha clarity!.
ReplyDeleteRaaghu
ಚೆನ್ನಾಗಿದೆ, ಎಂತಹವರಿಗೂ ಅರ್ಥವಾಗುವ ಹಾಗಿದೆ :)
ReplyDeletephotoshop nalli maadida nantarave chennaagi barodu sir.... haage maaDodaralli enu tappilla anisatte....
ReplyDeleteellarigu artha aago haagi barediddeeraa....
dhanyavaaada
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು......
ReplyDeleteಸು೦ದರ ಫೋಟೋಗಳೊ೦ದಿಗೆ ಉತ್ತಮ ಮಾಹಿತಿ ತಿಳಿಸಿದ್ದೀರಿ. ಧನ್ಯವಾದಗಳು.
ReplyDeleteಚಿತ್ರ ಲೇಖನ ಸೊಗಸಾಗಿದೆ ಮತ್ತು ನಿಮ್ಮ ಛಾಯಾಗ್ರಹಣ ಕಲೆಯೂ ಕೂಡ ಸೊಗಸಾಗಿದೆ. ಶುಭ ಹಾರೈಕೆಗಳು .
ReplyDelete