Monday, July 5, 2010

ವಂಚನೆ ......

               ಆ ಕೆಲವು ದಿನಗಳಲ್ಲೇ......
               ನಿನ್ನ ಸುಂದರ ರೂಪದಿಂದ.....
               ಕಣ್ಣಿನ ಓರೆ ನೋಟದಿಂದ.....
               ಸವಿಯಾದ ಮಧುರ ಮಾತುಗಳಿಂದ.....
               ನನ್ನ ಹೃದಯದ ಕದ ತಟ್ಟಿ
               ಮನ ಸೂರೆ ಗೈದು ಪ್ರೀತಿಸಿದ
               ಓ ನನ್ನ ನಲ್ಲ.....

               ಆ ಒಂದು ಹುಣ್ಣಿಮೆಯ ಬೆಳದಿಂಗಳಲ್ಲಿ....
               ನನ್ನ ಮೃದು ಮಧುರ
               ಅಧರದ ಸವಿಯುಣಿಸಿ....
               ನಿನ್ನಾಸೆಗಳ ಪೂರೈಸಿ....
               ನಿನ್ನಾಶಾಗೋಪುರದ ಉತ್ತುಂಗಕ್ಕೇರಿಸಿದ
               ನನ್ನನ್ನಿಂದು.....

               ನಿನ್ನ ..... ನೆನಪುಗಳ....
               ಕಣ್ಣಂಚಿನ ಕಂಬನಿಗಳ....
               ನಡುವೆ....
               ಒಂಟಿಯಾಗಿ ಬಿಟ್ಟು 
               ವಂಚಿಸಿ ......
               ನಡೆದೆಯಲ್ಲ....

2 comments:

  1. Hey ee viraha yake anta kelboda?? Yaradru kai kotreno?? :-)

    ReplyDelete
  2. ಇಲ್ಲ ಕಣೋ ಇದು ಒಂದು ಹುಡುಗಿ ಮೋಸ ಹೋದ ಕಥೆ ...

    ReplyDelete