ಈಗ ಕಂಪ್ಯೂಟರ್ ಗಳಲ್ಲಿ ಫೋಟೋಗಳನ್ನು ಎಡಿಟ್ ಮಾಡಲು ಹಲವಾರು ಸಾಫ್ಟ್ ವೇರ್ ಗಳು ಬಂದಿರುವುದರಿಂದ ನಾವು ಒಮ್ಮೆ ತೆಗೆದ ಚಿತ್ರವನ್ನು ನಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿಕೊಳ್ಳಬಹುದು. ಅಂತೆಯೇ ನಾನು ಕೂಡಾ ಈ ಚಿತ್ರವನ್ನು ಪಿಕಾಸ ಫೊಟೋ ಎಡಿಟರ್ ನಲ್ಲಿ ಈ ರೀತಿಯಾಗಿ ಎಡಿಟ್ ಮಾಡಿದ್ದೇನೆ. ನೋಡುವುದಕ್ಕೆ ಏನೋ ಭಾರೀ ಕೆಲಸ ಮಾಡಿದಂತೆ ಕಾಣುತ್ತದೆ ಆದರೆ ತುಂಬಾ ಸುಲಭ ನೀವೂ ಕೂಡಾ ಪ್ರಯತ್ನಿಸಬಹುದು. ಈ ಕೆಳಗಿನ ಚಿತ್ರವನ್ನು ನೋಡಿ.
ಈ ರೀತಿಯ ಚಿತ್ರಗಳನ್ನು ತಯಾರಿಸಲು ನೀವು ಮಾಡೇಕಾಗಿರುವುದು ಇಷ್ಟೇ.....
1) ಎಡಿಟ್ ಮಾಡಲು ಬಯಸುವ ಚಿತ್ರವನ್ನು Picasa Photo Viewer ನಲ್ಲಿ ಓಪನ್ ಮಾಡಿಕೊಳ್ಳಿ
2) ಚಿತ್ರದ ಮೇಲೆ Right Click ಮಾಡಿ Edit in Picasa ಮೇಲೆ ಕ್ಲಿಕ್ ಮಾಡಿ
3) ಎಡಿಟ್ ವಿಂಡೋ ಓಪನ್ ಆದಮೇಲೆ ಎಡಬದಿಯಲ್ಲಿ ಮೂರು ಟ್ಯಾಬ್ ಗಳು ಕಾಣುತ್ತವೆ Basic Fixes, Tuning, Effects.
2) ಚಿತ್ರದ ಮೇಲೆ Right Click ಮಾಡಿ Edit in Picasa ಮೇಲೆ ಕ್ಲಿಕ್ ಮಾಡಿ
3) ಎಡಿಟ್ ವಿಂಡೋ ಓಪನ್ ಆದಮೇಲೆ ಎಡಬದಿಯಲ್ಲಿ ಮೂರು ಟ್ಯಾಬ್ ಗಳು ಕಾಣುತ್ತವೆ Basic Fixes, Tuning, Effects.
ಅದರಲ್ಲಿ Effects ಮೇಲೆ ಕ್ಲಿಕ್ ಮಾಡಿದರೆ ಕೆಳಗಡೆ ಹಲವಾರು Effect ಗಳು ಕಾಣುತ್ತವೆ, ಅದರಲ್ಲಿ Focal B&W ಅಂತಿರೋದ್ರ ಮೇಲೆ ಕ್ಲಿಕ್ ಮಾಡಿದರೆ ಸರಿ ಅಷ್ಟೇ.... ಚಿತ್ರ ಸಿದ್ಧವಾಗುತ್ತದೆ.
ಎಡಬದಿಯಲ್ಲಿ Size ಮತ್ತು Sharpness ಅಂತ ಎರಡು ಬಟನ್ ಗಳು ಇರುತ್ತವೆ ಅದರಿಂದ ನಿಮಗೆ ಬೇಕಾದ ಗಾತ್ರ ಹಾಗೂ ಶಾರ್ಪ್ ನೆಸ್ ಗಳನ್ನು ಹೊಂದಿಸಿಕೊಳ್ಳಬಹುದು. ಚಿತ್ರದ ಮೇಲೆ ಬಂದಿರುವ " + " ಚಿಹ್ನೆಯನ್ನು ನೀವು ಎಲ್ಲಿಗೆ ಚಲಿಸುತ್ತೀರೋ ಆ ಭಾಗವು ಮಾತ್ರ ನೈಜ ಬಣ್ಣವನ್ನು ಹೊಂದಿ ಉಳಿದ ಭಾಗಗಳೆಲ್ಲವೂ ಕಪ್ಪು ಬಿಳುಪು ಬಣ್ಣವನ್ನು ಹೊಂದುತ್ತದೆ.
ಇದರಂತೆ ಎಡಿಟ್ ಮಾಡಿದ ಇನ್ನೆರಡು ಚಿತ್ರಗಳು ಇಲ್ಲಿವೆ.,
ಎಡಿಟ್ ಮಾಡುವುದಕ್ಕೆ ಮೊದಲು
ಎಡಿಟ್ ಮಾಡಿದ ನಂತರ
ಎಡಿಟ್ ಮಾಡುವುದಕ್ಕೆ ಮೊದಲು
ಎಡಿಟ್ ಮಾಡಿದ ನಂತರ






ಪ್ರೀತಿಯ ಗುರುಪ್ರಸಾದ್ ರವರೆ,
ReplyDeleteನಿಮ್ಮ ಬ್ಲಾಗ್ನ್ನು ನೋಡಿದೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಛಾಯಾಗ್ರಹಣದ ಬಗ್ಗೆ ನನಗೆ ಇತ್ತೀಚಿನ ದಿನಗಳಲ್ಲಿ ತುಂಬಾ ಆಸಕ್ತಿ ಹೆಚಾಗಿದೆ ಅದರ ಬಗ್ಗೆ ವಿಷಯ ಸಂಗ್ರಹಿಸಲು ಅಂತ್ರಜಾಲದ ಮೊರೆ ಹೋದ ನನಗೆ ಹಲವಾರು ಉಪಯುಕ್ತ ಮಾಹಿತಿ ದೊರೆಯುತ್ತಾ ಹೋಯಿತು,ಈಗ ನಿಮ್ಮ ಬ್ಲಾಗಿನಲ್ಲಿ ಛಾಯಾಗ್ರಹಣದ ಬಗ್ಗೆ ನೋಡಿದೆ ತುಂಬಾ ಸಂತೋಷವಾಯಿತು.