Friday, July 2, 2010


ಕೋತಿಗಳ ಮುಖಭಾವ......

     ಮೊನ್ನೆ ಆಗುಂಬೆಗೆ ಹೋಗಿದ್ದಾಗ ಸೂರ್ಯಾಸ್ತ ನೋಡುವ ಸ್ಥಳದಲ್ಲಿ ಹಲವಾರು ಕೋತಿಗಳು ಇದ್ದವು.   ಅಲ್ಲಿನ ಕೋತಿಗಳಿಗೆ ತುಂಬಾ ಧೈರ್ಯ, ಮನುಷ್ಯರನ್ನು ಕಂಡರೆ ಹೆದರಿಕೆಯೇ ಇಲ್ಲ.   ನಾವೇನಾದರೂ ಅವಕ್ಕೆ ತರಲೆ ಮಾಡಿದರೆ ನಮಗೇ ಹೆದರಿಸುತ್ತವೆ, ಹಣ್ಣು, ಚಿಪ್ಸು, ತಿಂಡಿ ಇತ್ಯಾದಿಗಳನ್ನು ಕೊಟ್ಟರೆ ನಮ್ಮ ಕೈನಿಂದಲೇ ತೆಗೆದುಕೊಂಡು ತಿನ್ನುತ್ತವೆ.  ನೂರಾರು ಕೋತಿಗಳಿರುವುದರಿಂದ ಹಲವಾರು ಬಗೆಯ ಚಿತ್ರಗಳನ್ನು ತೆಗೆಯಬಹುದು. ಈ ಕೆಳಗೆ ನಾನು ಸೆರೆಹಿಡಿದ ಕೆಲವು ಕೋತಿಗಳ ಮುಖಭಾವದ  ಚಿತ್ರಗಳನ್ನು ಕಾಣಬಹುದು.

ತೂಕಡಿಸುತ್ತ ಕುಳಿತಿರುವ ಕೋತಿ, 

ಅನುಮಾನದಿಂದ ನೋಡುತ್ತಿರುವ ಕೋತಿ,

ಏನನ್ನೋ ಹೇಳುತ್ತಿರುವ ಕೋತಿ,
 
ನೀವು ಹೇಳಿದಹಾಗೆಲ್ಲ ಪೋಸ್ ಕೊಡಲು ಆಗುವುದಿಲ್ಲವೆಂದು ಕೂಗಾಡುತ್ತಿರುವ ಕೋತಿ,

 
ಇನ್ನೂ ಹಲವು ಬಗೆಯನ್ನು ಚಿತ್ರಿಸಬಹುದಾಗಿತ್ತು, ಏನ್ಮಾಡೋದು ಸಮಯಾಭಾವ.,

3 comments:

  1. ಅಬ್ಬಬ್ಬಾ ಮ೦ಗನಿ೦ದ ಮಾನವ ಅನ್ನೊದು ಎಷ್ಟು ಸತ್ಯ......ಅವುಗಳ ಪೊಸ್ ಗಳನ್ನು ನೊಡ್ತಿದ್ರೆ ಮಾನವರ ಪುರ್ವಜರನ್ನು ನೊಡಿದ೦ತಾಗುತ್ತೆ...
    ಚಿತ್ರಗಳು ತು೦ಬಾ ಚನ್ನಾಗಿವೆ..

    ReplyDelete
  2. Where did you take all these snaps?
    It's really nice!!

    ReplyDelete