Monday, July 19, 2010

ಯಾರವರು ?......

               ನಾವಿಬ್ಬರೂ ಹಲವು
               ವರುಷಗಳಿಂದ ಪ್ರೀತಿಸುತ್ತಾ......
               ಕಟ್ಟಿದ
               ಕನಸಿನ ಅರಮನೆಗಿಂದು.....
               ಬರ ಸಿಡಿಲು
               ಬಡಿದು
               ಬಿರುಕು ಕಾಣಿಸಲು ......
               ಕಂಗಾಲಾದ
               ನಾನು......

               ನನ್ನಂತರಂಗದಲಿ ನೀ ಕಟ್ಟಿದ
               ಅರಮನೆಯೊಳಗೆ
               ನೀನಿರುವೆಯೋ ಇಲ್ಲವೋ.....
               ಎಂದು ಹುಡುಕಾಡಿದೆ........

               ಸಧ್ಯ.... ಅದರೊಳಗೆ
               ನೀನು ಮತ್ತು
               ನಿನ್ನ ನೆನಪುಗಳು...
               ಜೋಪಾನವಾಗಿದ್ದವು....

               ನಿನ್ನಂತರಂಗದಲಿ ನಾ ಕಟ್ಟಿದ
               ಅರಮನೆಯೊಳಗೆ
               ನಾನಿರುವೆನೋ ಇಲ್ಲವೋ......
               ಎಂದೂ... ಹುಡುಕಾಡಿದೆ......

               ಆದರೆ......
               ನಾ ಕಟ್ಟಿದ ಅರಮನೆ
               ಮುರಿದು ಬಿದ್ದಿತ್ತು......
               ಅಲ್ಲಿ
               ನಾನೂ...  ಇರಲಿಲ್ಲ......
               ನನ್ನ
               ನೆನಪುಗಳೂ... ಇರಲಿಲ್ಲ.......
              
               ಬೇರಾರೋ ಸುಳಿದಾಡುತ್ತಿರುವಂತೆ
               ಭಾಸವಾಯಿತು.....

4 comments:

  1. ತುಂಬಾ ಚೆನ್ನಾಗಿದೆ. .ಇಷ್ಟವಾಯ್ತು...

    ReplyDelete
  2. ಚೆನ್ನಾಗಿದೆ ಕವನ..ಹೀಗೆ ಬರೆಯುತ್ತೀರಿ.
    ನಿಮ್ಮವ,
    ರಾಘು.

    ReplyDelete
  3. ನಾನು ಕಟ್ಟಿದ್ದ ಅರಮನೆ ಮುರಿದು ಬಿದ್ದಿತ್ತು ...ನನ್ನ ಕನಸುಗಳೂ ಇರಲಿಲ್ಲ....ಕನಸಿನರಮೆನೆ ಬಿದ್ದದ್ದು ಮತ್ತೆ ಭಾವ ಎರಡೂ ಮೆಚ್ಚುಗೆಯಾತು

    ReplyDelete
  4. ದಿಲೀಪ್, ರಾಘು ಹಾಗೂ ಜಲನಯನ ರವರಿಗೆ ನನ್ನ ಬ್ಲಾಗಿಗೆ ಸ್ವಾಗತ. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು

    ReplyDelete