Tuesday, July 5, 2011

ಬಾರೇ.... ಬಾರೇ.... ಚೆಂದದ ಚೆಲುವಿನ ತಾರೆ.....

               ಮ್ಯಾಂಡೋಲಿನ್ ನಲ್ಲಿ ನೆಡೆಸಿದ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರಿಂದ ಸಿಕ್ಕ  ಪ್ರೋತ್ಸಾಹದಿಂದ ಸಂತೋಷವಾಗಿ ಇನ್ನೂ ಹೆಚ್ಚು ಹೆಚ್ಚು ಕಲಿಯಬೇಕೆಂಬ ಹಂಬಲ ಉಂಟಾಗಿದೆ.   ಆ ದಿನ ನಿಮಗೆ ಒಂದು ಹಾಡನ್ನು ಕೇಳಿಸುತ್ತೇನೆಂದು ಹೇಳಿದ್ದೆ.  ಇವತ್ತು ಮಧ್ಯಾಹ್ನ ಒಂದು ಹಾಡನ್ನು ನುಡಿಸಿ ಸಿಸ್ಟಂ ಗೆ ರೆಕಾರ್ಡ್ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇನೆ.  ನಾಗರ ಹಾವು ಚಿತ್ರದ ಈ ಹಾಡು ಎಲ್ಲರೂ ಕೇಳಿರುತ್ತೀರಿ.....  ಹೇಗಿದೆ ಎಂದು ತಿಳಿಸಿ...... ಸಂಗೀತ ನಿರ್ದೇಶನ ವಿಜಯ ಭಾಸ್ಕರ್ ಅವರದು... ವಿಡಿಯೋದಲ್ಲಿ ತಪ್ಪಾಗಿ ಉದಯ ಭಾಸ್ಕರ್ ಎಂದು ಟೈಪಾಗಿದೆ.. ಕ್ಷಮಿಸಿ....


16 comments:

  1. ಚೆನ್ನಾಗಿದೆ...

    ReplyDelete
  2. ಸೂಪರ್ ಹಾಡು,ನಿಮ್ಮ ಮ್ಯಾಂಡೋಲಿನ್ ನಲ್ಲಿ ಇನ್ನೂ ಸೂಪರ್ ಆಗಿ ಮೂಡಿಬಂದಿದೆ.

    ReplyDelete
  3. ಗುರುಗಳೆ..

    ಹಾಡು ಕೇಳು.. ಕೇಳುತ್ತ.. ಎಲ್ಲೋ ಕಳೆದು ಹೋದೆ..
    ಹಳೆಯ ನೆನಪುಗಳ ಸಂಗಡ..

    ಇದು ನನ್ನ ಬಲು ಇಷ್ಟದ ಹಾಡು..

    ನಿಮ್ಮ ಪ್ರಯತ್ನ ಮುಂದುವರೆಯಲಿ... ಜೈ ಹೋ !!

    ReplyDelete
  4. Awesome Gurugale :-)
    Heege olleya tune galannu kelisuttiri.

    ReplyDelete
  5. ವಾಹ್!! ತುಂಬಾ ಚೆನ್ನಾಗಿದೆ ಶುಭವಾಗಲಿ ಹೀಗೆ ಹೊಸ ಹೊಸ ಪ್ರಯತ್ನಗಳು ಸಾಗಲಿ

    ReplyDelete
  6. Gurugale adbhuta.... :) endoo mareayada ee haadu... :)

    nangu aase agtide kalibeku anta... :)

    ReplyDelete
  7. ತುಂಬ ಹಿಡಿಸಿತು.ಚೆನ್ನಾಗಿದೆ.
    Keep going..
    :-)

    ReplyDelete
  8. ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹ ನೀಡಿತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು.....

    ReplyDelete
  9. ಸಾರ್.. ನಿಜವಾಗಿಯೂ ಅದ್ಭುತವಾಗಿತ್ತು! ಕೇಳುತ್ತಾ ಕುಳಿತಾಗ ಮನ ಅರಳಿತು! ಹೀಗೇ ನಿಮ್ಮ ಮ್ಯಾಂಡೋಲಿನ್ ವಾದನಗಳು ಇನ್ನಷ್ಟು ಮೂಡಿ ಬರಲಿ ಎಂದು ಆಶಿಸುವೆ.

    ReplyDelete
  10. ಸಂಗೀತ ನಿರ್ದೇಶನ ವಿಜಯ ಬಾಸ್ಕರ್ ಆಗಬೇಕು ಸರ್
    http://www.kannadalyrics.com/?q=node/2618

    http://www.hitxp.com/music/kannadanotes/280804_1.htm

    ReplyDelete
  11. @ ನಮನ... ಹೌದು.... ನೀವು ಹೇಳಿದ ಮೇಲೆ... ನಾನು ನೋಡಿದ್ದು... ವಿಜಯ ಭಾಸ್ಕರ್ ಅಂತ ಗೊತ್ತಿತ್ತು... ಆದರೆ ಟೈಪಿಸುವಾಗ ಉದಯ ಭಾಸ್ಕರ್ ಆಗಿದೆ...... ಗಮನಿಸಿ ತಿಳಿಸಿದ್ದಕ್ಕೆ ಧನ್ಯವಾದಗಳು... ಪೋಸ್ಟ್ ನಲ್ಲಿ ಸರಿಪಡಿಸಿದ್ದೇನೆ.

    ReplyDelete
  12. ಸರ್ ತುಂಬಾನೆ ಚನ್ನಾಗಿದೆ.. ನಿಮಗೆ ಶುಭವಾಗಲಿ

    ReplyDelete
  13. ಚೆನ್ನಾಗಿದೆ, ಇನ್ನೊಂದಿಷ್ಟು ಹಳೆ ಹಾಡುಗಳು ಮೂಡಿಬರಲಿ,

    ReplyDelete